ಬಂಗಾರಿ 01.02.2013 ಬಿಡುಗಡೆ
Posted date: 01 Fri, Feb 2013 ? 11:35:44 AM

ಶಿವಶಂಕರ್ ಫಿಲಂಸ್ ಪ್ರೊಡಕ್ಷನ್ ಲಾಂಛನದಲ್ಲಿ ಎ.ಎಲ್ಲಪ್ಪ ನಿರ್ಮಿಸುತ್ತಿರುವ ಬಂಗಾರಿ ಚಿತ್ರವು ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.  ಮಾ ಚಂದ್ರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಆರ್. ನಿರಂಜನ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ, ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ, ಮಾಲೂರು ಶ್ರೀನಿವಾಸ್, ಕಂಬಿ ರಾಜು ದೇವಸಂಪತ್ ಮುರುಳಿ ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನವಿದೆ.  ಯೋಗೀಶ್, ರಾಗಿಣಿ, ಸಾಧುಕೋಕಿಲ, ದಂಡಪಾಣಿ, ಸುಮನ ಶೆಟ್ಟಿ, ರಮೇಶ್ ಭಟ್, ಸ್ವಯಂವರ ಚಂದ್ರು, ಸತ್ಯಪ್ರಿಯ ಶರತ್ ಲೋಹಿತಾಶ್ವ, ಶಂಕರ್ ಭಟ್, ಗಣೇಶ್‌ರಾವ್, ವೆಂಕಟೇಶ್ ಪ್ರಸಾದ್, ಮೊದಲಾದವರು ಅಭಿನಯಿಸಿದ್ದಾರೆ.
೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಂಗಾರಿ ಬಿಡುಗಡೆ

ಲೂಸ್ ಮಾದ, ಯೋಗಿ, ರಾಗಿಣಿ ಅಭಿನಯದ ಬಂಗಾರಿ ಚಿತ್ರವು ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.  ಮಾ.ಚಂದ್ರು ನಿರ್ದೇಶನದ ಈ ಚಿತ್ರವನ್ನು ಎ.ಎಲ್ಲಪ್ಪ ನಿರ್ಮಿಸಿದ್ದಾರೆ.  ರಾಜ್ಯಾಧ್ಯಂತ ವಿತರಣೆ ಹಕ್ಕನ್ನು ಬಹಾರ್ ಫಿಲಂಸ್ ನ ಭಾಷಾ ಖರೀದಿಸಿದ್ದಾರೆ. ಸುಮಾರು ೧೦೦ ರಿಂದ ೧೫೦ ಚಿತ್ರಮಂದಿರಗಳಲ್ಲಿ ಬಂಗಾರಿ ಚಿತ್ರವು ಬಿಡುಗಡೆಯಾಗಲಿದೆ.  ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಾ. ಚಂದ್ರು ಯೋಗಿ ಈ ಚಿತ್ರದಲ್ಲಿ ತುಂಬಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರ ಪ್ರಾರಂಭವಾಗಿ ಒಂದು ವರ್ಷವಾಯಿತು.  ಚಿತ್ರ ಉತ್ತಮವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಯಾವ ಹಂತದಲ್ಲೂ ಕಾಂಪ್ರೊಮೈಸ್ ಆಗದೆ ಅದ್ಧೂರಿಯಾಗಿ ಈ ಸಿನಿಮಾವನ್ನು ಮಾಡಿದ್ದೇವೆ.  ನಿರ್ಮಾಪಕ ಎಲ್ಲಪ್ಪನವರು ಹೊಸಬರನ್ನು ನಂಬಿ ಹಣ ಖರ್ಚುಮಾಡಿದ್ದಾರೆ.  ಈಗಾಗಲೇ ಆಡಿಯೋ ಸೂಪರ್ ಹಿಟ್ ಆಗಿದ್ದು, ಬಂಗಾರಿಗೆ ಪ್ರೀತಿ ಬಂತೆ ಹಾಡು ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ.  ಎಂದು ಚಿತ್ರದ ಹೈಲೇಟ್ ಹೇಳಿಕೊಂಡರು.  

ಸಂಗೀತ ನಿರ್ದೇಶಕ ಎ.ಎಂ.ನೀಲ್ ಮಾತನಾಡಿ ಚಿತ್ರದಲ್ಲಿ ೬ ಹಾಡುಗಳಿದ್ದು, ಪ್ರತೀ ಹಾಡು ಬೇರೆ ಬೇರೆ ಶೈಲಿಯಲ್ಲಿ ಮೂಡಿಬಂದಿದೆ.  ಎಲ್ಲಾ ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ.  ನಿರ್ಮಾಪಕ ಎಲ್ಲಪ್ಪ ಮಾತನಾಡುತ್ತಾ ನಿರ್ದೇಶಕರು ಸ್ವಲ್ಪ ತಡಮಾಡಿದರೂ ಹೇಳಿದ ಹಾಗೆ ಸಿನಿಮಾ ಮಾಡಿಕೊಟ್ಟಿದ್ದಾರೆ.  ಆಕ್ಷನ್, ತಾಯಿ ಸೆಂಟಿಮೆಂಟ್, ಫ್ಯಾಮಿಲ್ ಡ್ರಾಮಾ ಹೀಗೆ ಎಲ್ಲಾ ತರಹದ ಅಂಶಗಳು ಚಿತ್ರದಲ್ಲಿವೆ.  ಮುಖ್ಯವಾಗಿ ನಾಯಕ ಯೋಗಿಗೆ ಒಂದು ಹೊಸ ಇಮೇಜನ್ನು ಬಂಗಾರಿ ನೀಡಲಿದೆ ಎಂದು ಹೇಳಿದರು.

ಇದೊಂದು ಆಕ್ಸನ್ ಚಿತ್ರವಾದರೂ ನನ್ನ ಪಾತ್ರಕ್ಕೆ ಡಿಫರೆಂಟ್ ಶೈಲಿಗಳಿವೆ.  ನನ್ನ ಮೊದಲ ಚಿತ್ರದಲ್ಲಿ ಅಪರಾಧಿಯಾಗಿಸಿ ಕೈಯಲ್ಲಿ ಸ್ಲೇಟ್ ಹಿಡಿಸಿದ್ದರು.  ಇದರಲ್ಲೂ ಅದೇ ರೀತಿ ಮುಂದುವರೆದಿದೆ ಎಂದು ನಾಯಕ ಯೋಗಿ ಪಾತ್ರದ ಬಗ್ಗೆ ವಿವರಿಸಿದರು.  

ನಾಯಕಿ ರಾಗಿಣಿಗೆ ಈ ಚಿತ್ರದ ತಂಡದ ಜೊತೆ ಮೊದಲ ಅನುಭವ ಒಳ್ಳೆ ತಂಡ, ನಿರ್ಮಾಪಕರು ತುಂಬಾ ಖರ್ಚು ಮಾಡಿ ಸಿನಿಮಾ ಮಾಡಿದ್ದಾರೆ.  ಹಾಡುಗಳು ಗೆದ್ದಂತೆ ಸಿನಿಮಾ ಕೂಡ ಹಿಟ್ ಆಗಲಿದೆ ಎಂದು ಹೇಳಿದರು.  ಈ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ವಿತರಕ ಬಹಾರ್ ಫಿಲಂಸ್ ಭಾಷಾ ಹಾಗೂ ಚಿತ್ರದ ಛಾಯಾಗ್ರಾಹಕ ನಿರಂಜನ್ ಬಾಬು ಉಪಸ್ಥಿತರಿದ್ದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed